ಲಸಿಕೆಯ ನೀಡುವುದು ತಡವಾದರೆ ಮಕ್ಕಳಲ್ಲಿ ಸೋಂಕುಗಳ ಅಪಾಯ ಹೆಚ್ಚುತ್ತದೆ ಎಂದು ಮಕ್ಕಳ ತಜ್ಞರ ನಂಬಿಕೆಯಾಗಿದೆ. ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದು ಅವರನ್ನು ಸಂಭವನೀಯ ಗಂಭೀರ ರೋಗಗಳಿಂದ ರಕ್ಷಿಸಲು ಅಗತ್ಯವಾಗಿರುತ್ತದೆ.
ಲಸಿಕೆ ಹಾಕಿಸುವುದನ್ನು ಮರೆಯಬೇಡಿ.
ನಿರ್ಬಂಧಿಸಬೇಕಾಗಿರುವುದು ರೋಗಗಳನ್ನು. ಬಾಲ್ಯವನ್ನಲ್ಲ.
18 ವರ್ಷ ವಯಸ್ಸಿನವರೆಗೆ ಶಿಫಾರಸು ಮಾಡಲಾದ* ಲಸಿಕೆಗಳ ಪಟ್ಟಿಯನ್ನು ನೋಡಲು ಕೆಳಗಿನ ಶೀರ್ಷಿಕೆಗಳ ಮೇಲೆ ಕ್ಲಿಕ್ ಮಾಡಿ






ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಿಮ್ಮ ಮಗುವಿಗೆ ಲಸಿಕೆ ಹಾಕಿಸುವುದನ್ನು ತಪ್ಪಿಸಿಕೊಂಡಿದ್ದಕ್ಕಾಗಿ ಚಿಂತಿಸುತ್ತಿದ್ದೀರಾ?
ನಿಮ್ಮ ಪ್ರಶ್ನೆಗಳಿಗೆ ಕೆಳಗೆ ಉತ್ತರ ಪಡೆಯಿರಿ
- ಮಕ್ಕಳನ್ನು ಗಂಭೀರ ಮತ್ತು ಸಂಭವನೀಯವಾಗಿ ಮಾರಣಾಂತಿಕ ರೋಗಗಳಿಂದ ಸುರಕ್ಷಿತವಾಗಿಡಬೇಕೆಂದರೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸುವುದು ಮುಖ್ಯ. ಶಿಫಾರಸು ಮಾಡಲಾದ ರೋಗನಿರೋಧಕತೆ ವೇಳಾಪಟ್ಟಿ ಪ್ರಕಾರ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಶಿಫಾರಸು ಮಾಡುತ್ತದೆ
- ಮಕ್ಕಳಿಗೆ ಲಸಿಕೆ ಹಾಕಿಸದಿದ್ದಾಗ ಅಥವಾ ಲಸಿಕೆ ಹಾಕಿಸುವುದು ತಡವಾದಾಗ, ಲಸಿಕೆಯಿಂದ ಸುಲಭವಾಗಿ ತಡೆಗಟ್ಟಬಹುದಾದ ಗಂಭೀರ ರೋಗಗಳು ಅವರಿಗೆ ಹಾನಿಯುಂಟು ಮಾಡುತ್ತವೆ
- ನಿಮ್ಮ ಮಗುವಿಗೆ ಶಿಫಾರಸು ಮಾಡಲಾದ ವಯಸ್ಸಿಗೆ ತಕ್ಕ ಲಸಿಕೆಗಳ ಮಾಹಿತಿ ಹೊಂದಿರುವ ನಿಮ್ಮ ಲಸಿಕೆ ಚೀಟಿಯನ್ನು ಇಂದೇ ನೋಡಿ. ತಪ್ಪಿಸಿಕೊಂಡ ಅಥವಾ ಹಾಕಿಸಬೇಕಾಗಿರುವ ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮಕ್ಕಳ ತಜ್ಞರೊಂದಿಗೆ ಸಮಾಲೋಚಿಸಿ
- ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಓ) ನೀಡಿದ ಜಾಗತಿಕ ಮಾರ್ಗಸೂಚಿಗಳು: ರೋಗನಿರೋಧಕತೆ ಅಗತ್ಯ ಆರೋಗ್ಯ ಸೇವೆಯಾಗಿದೆ. ರೋಗನಿರೋಧಕ ಸೇವೆಗಳಲ್ಲಿ ಸ್ವಲ್ಪ ಹೊತ್ತಿನವರೆಗೆ ಅಡಚಣೆಯುಂಟು ಮಾಡಿದರೂ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ವೇಗವಾಗಿ ಹರಡುವ ಲಸಿಕೆಯಿಂದ ತಡೆಯಬಹುದಾದ ರೋಗಗಳ (ವಿಪಿಡಿ ಗಳು) ಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ
- ಇಂಡಿಯನ್ ಅಕ್ಯಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಯಿಂದ ಭಾರತೀಯ ಮಾರ್ಗಸೂಚಿಗಳು: ಸಂಪರ್ಕದ ಮೂಲಕ ಹರಡಬಹುದಾದ ರೋಗಗಳ ತಡೆ (ರೋಗನಿರೋಧಕಗಳನ್ನು ಒಳಗೊಂಡು) ಮತ್ತು ನಿರ್ವಹಣೆಯನ್ನು “ಅಗತ್ಯ ವೈದ್ಯಕೀಯ ಸೇವೆ” ಎಂದು ಪರಿಗಣಿಸಲಾಗುತ್ತದೆ. “ರೋಗನಿರೋಧಕತೆ ಮೂಲ ಆರೋಗ್ಯ ಸೇವೆಯಾಗಿದೆ” ಮತ್ತು ಇದಕ್ಕೆ ಅನುಕೂಲವಿದ್ದಲ್ಲೆಲ್ಲ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸಂಪರ್ಕದ ಮೂಲಕ ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಮತ್ತು ಅವು ಮುಂದುವರಿಯದಂತೆ ಸಂರಕ್ಷಿಸಲು ಪ್ರಾಶಸ್ತ್ಯ ನೀಡಬೇಕು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಒಂದು ಮಗುವಿನ ರೋಗನಿರೋಧಕತೆಯನ್ನು ಬಲಪಡಿಸುವಲ್ಲಿ ಯಾವುದೇ ಅಪಾಯವನ್ನು ದಾಖಲಿಸಲಾಗಿಲ್ಲ
- ಮುಂಚಿತವಾಗಿ ಲಸಿಕೆ ಹಾಕಿಸುವಿಕೆಯ ಅಪಾಯಿಂಟ್ಮೆಂಟ್ ಪಡೆದುಕೊಂಡು ಮಾತ್ರ ನಿಮ್ಮ ಮಕ್ಕಳ ತಜ್ಞರಿಗೆ ಭೇಟಿ ನೀಡಿ.
- ಆಗಾಗ ಮದ್ಯ-ಹೊಂದಿದ ಸ್ಯಾನಿಟೈಸರ್ ಅನ್ನು ಉಪಯೋಗಿಸಿ.
- ಹಸುಗೂಸುಗಳನ್ನು ಹೊರತುಪಡಿಸಿ ಎಲ್ಲ ಕಾಳಜಿದಾತರು ಮತ್ತು ಮಕ್ಕಳು ಮಾಸ್ಕ್ ಧರಿಸಬೇಕು.
- ಯಾವಾಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಸಾಧ್ಯವಾದಷ್ಟು ಮೇಲ್ಮೈಗಳನ್ನು ಮುಟ್ಟದಂತೆ ಎಚ್ಚರ ವಹಿಸಿ.
- ಯಾವುದೇ ಗೊಂಬೆಗಳನ್ನು/ವೈಯಕ್ತಿಕ ವಸ್ತುಗಳನ್ನು ಒಯ್ಯಬೇಡಿ ಮತ್ತು ಬಾಗಿಲ ಹಿಡಿಕೆಗಳನ್ನು ಮುಟ್ಟಬೇಡಿ.
- ಡಿಜಿಟಲ್ ಪೇಮೆಂಟ್ ಗಳನ್ನು ಹೆಚ್ಚಾಗಿ ಉಪಯೋಗಿಸಿ.
- ಹಿರಿಯ ನಾಕರೀಕರು (60 ವರ್ಷಗಳಿಗಿಂತ ಹೆಚ್ಚು ವಯಸ್ಸಿನವರು) ಲಸಿಕೆ ಹಾಕಿಸುವುದಕ್ಕಾಗಿ ಜೊತೆಗೆ ಹೋಗಕೂಡದು.
- ಲಸಿಕೆ ಹಾಕಿಸುವ ಚಿಕಿತ್ಸಾಲಯದಲ್ಲಿ ಸಿಬ್ಬಂದಿಯ ಸಲಹೆಯ ಮೇರೆಗೆ ಚಿಕಿತ್ಸಾಲಯದೊಳಗೆ ಪ್ರವೇಶಿಸಿ, ಹೊರಗೆ ಬನ್ನಿ ಮತ್ತು ಚಿಕಿತ್ಸಾಲಯದೊಳಗೆ ನಡೆದುಕೊಳ್ಳಿ.
- ಅತ್ಯಗತ್ಯ ಉತ್ಪನ್ನಗಳನ್ನು (ಹಾಲು, ಔಷಧಿಗಳು ಇತ್ಯಾದಿ) ಮತ್ತು ಸೇವೆಗಳನ್ನು (ಬ್ಯಾಂಕಿಂಗ್, ಆರೋಗ್ಯ ಕಾಳಜಿ ಇತ್ಯಾದಿ) ಪಡೆಯಲು ಹೊರಗೆ ಹೋಗುವುದರಿಂದ ಕೂಡ ಕೋವಿಡ್-19 ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ. ಆದರೆ ಅವಶ್ಯಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಾವು ಅಪಾಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ
- ಅದೇ ರೀತಿ, ಲಸಿಕೆ ಹಾಕಿಸುವುದು ಅತ್ಯಗತ್ಯ ವೈದ್ಯಕೀಯ ಸೇವೆಯಾಗಿದೆ ಮತ್ತು ಅವಶ್ಯಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಿಮಗೆ ಹಾಗೂ ನಿಮ್ಮ ಮಗುವಿಗೆ ಸೋಂಕು ತಗುಲುವ ಅಪಾಯವನ್ನು ಕಡಿಮೆ ಮಾಡತ್ತದೆ
- ಇದಕ್ಕೆ ಪ್ರತಿಯಾಗಿ, ಮಕ್ಕಳಿಗೆ ಲಸಿಕೆ ಹಾಕಿಸದಿದ್ದಾಗ ಅಥವಾ ಲಸಿಕೆ ಹಾಕಿಸುವುದು ತಡವಾದಾಗ, ಲಸಿಕೆಯಿಂದ ಸುಲಭವಾಗಿ ತಡೆಗಟ್ಟಬಹುದಾದ ಗಂಭೀರ ರೋಗಗಳು ಅವರಿಗೆ ಹಾನಿಯುಂಟು ಮಾಡುತ್ತವೆ
- ನಿಮ್ಮ ಮಕ್ಕಳ ತಜ್ಞರು ಸಲಹೆ ನೀಡಿದ ಪ್ರಕಾರ ಲಸಿಕೆ ಹಾಕಿಸಿಕೊಳ್ಳುವ ವೇಳಾಪಟ್ಟಿಯನ್ನು ಅನುಸರಿಸುವುದು ಲೇಸು
ನಿಮ್ಮ ಮಗುವಿನ ಲಸಿಕೆ ಹಾಕಿಸುವಿಕೆ ವೇಳಾಪಟ್ಟಿಯ ಬಗ್ಗೆ ಮಾರ್ಗದರ್ಶನ ನೀಡಲು ನಿಮ್ಮ ಮಕ್ಕಳ ತಜ್ಞರು ಅತ್ಯುತ್ತಮ ಬೆಂಬಲವಾಗಿರುತ್ತಾರೆ. ನಿಮ್ಮ ಮಗುವಿನ ಲಸಿಕೆ ಹಾಕಿಸುವಿಕೆ ಚೀಟಿಯನ್ನು ಇಂದೇ ನೋಡಿ ಮತ್ತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮಕ್ಕಳ ತಜ್ಞರೊಂದಿಗೆ ಸಮಾಲೋಚಿಸಿ.

ಲಸಿಕೆ ಹಾಕಿಸುವ ಮೂಲಕ 20 ಕ್ಕೂ ಹೆಚ್ಚು ಮಾರಣಾಂತಿಕ ರೋಗಗಳನ್ನು ತಡೆಗಟ್ಟಬಹುದು.
ಲಸಿಕೆ ಹಾಕಿಸುವುದು ಅನೇಕ ದೇಶಗಳಲ್ಲಿ ಲಸಿಕೆಯಿಂದ ತಡೆಗಟ್ಟಬಹುದಾದ ಹೆಚ್ಚಿನ ರೋಗಗಳನ್ನು ಅತ್ಯಂತ ಕಡಿಮೆ ಮಟ್ಟಗಳಲ್ಲಿ ಕಡಿಮೆ ಮಾಡಲು ಸಾಧ್ಯವಾಗಿಸಿದೆ. ಆದಾಗ್ಯೂ ಜನರಿಗೆ ಸೂಕ್ತವಾದ ಲಸಿಕೆಗಳನ್ನು ಸಿಗುವುದು ನಿಂತು ಹೋದರೆ, ಕೆಲವು ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳು ಮರುಕಳಿಸುವುದನ್ನು ನಾವು ಕಾಣಬಹುದು.
ಲಸಿಕೆಗಳು ಈ ರೀತಿ ಸಹಾಯ ಮಾಡಿವೆ:
- ಸ್ಮಾಲ್ ಪಾಕ್ಸ್ ಅಥವಾ ಸಣ್ಣ ಸಿಡುಬು ನಿರ್ಮೂಲನೆ ಮಾಡಿವೆ
- ಪೋಲಿಯೋ ಹೆಚ್ಚುಕಡಿಮೆ ನಿರ್ಮೂಲನೆ ಮಾಡಿದೆ
- 2000 ಮತ್ತು 2018 ರ ನಡುವೆ ಜಗತ್ತಿನಾದ್ಯಂತ ದಡಾರ ಸಂಬಂಧಿತ ಸಾವುಗಳ ಪ್ರಮಾಣವನ್ನು 18% ದಷ್ಟು ಕಡಿಮೆ ಮಾಡಿದೆ.
- ರೂಬಲ ಪ್ರಕರಣಗಳನ್ನು 2000-2018 ರ ನಡುವೆ 97% ರಷ್ಟು ಕಡಿಮೆ ಮಾಡಿದೆ
ಲಸಿಕೆಗಳು ಸಮಾಜಕ್ಕೆ ಕೂಡ ಸಹಾಯ ಮಾಡುತ್ತವೆ:
- ವ್ಯಕ್ತಿಗಳು- ಲಸಿಕೆ ನೀಡುವಿಕೆಗಳು ಮಕ್ಕಳಲ್ಲಿ ಸಾವಿಗೆ ಐತಿಹಾಸಿಕವಾಗಿ ಸಾಮಾನ್ಯ ಕಾರಣವಾಗಿದ್ದ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಿಂದ ರಕ್ಷಿಸಲು ಸಹಾಯ ಮಾಡುವ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸಲು ಸಹಾಯ ಮಾಡಬಲ್ಲವು.
- ಸಮುದಾಯಗಳು- ಲಸಿಕೆ ನೀಡುವಿಕೆ ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳು ಸಮುದಾಯಗಳೊಳಗೆ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
- ಆರ್ಥಿಕತೆಗಳು - ಲಸಿಕೆ ಹಾಕುವುದು ಆರ್ಥಿಕ ಅಭಿವೃದ್ಧಿ, ಉತ್ಪಾದಕತೆ ಮತ್ತು ಕೆಲಸ ಮಾಡುವವರ ಭಾಗವಹಿಸುವಿಕೆಯ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರಬಲ್ಲದು ಎಂದು ಅಧ್ಯಯನಗಳು ಸೂಚಿಸುತ್ತವೆ.
**ರೂಬೆಲ ಪ್ರಕರಣಗಳು 97% ರಷ್ಟು ಕಡಿಮೆಯಾಗಿವೆ ಅಂದರೆ 2000 ದಲ್ಲಿ 102 ದೇಶಗಳಲ್ಲಿ 670894 ರಿಂದ 2018 ರಲ್ಲಿ 151 ದೇಶಗಳಲ್ಲಿ 14621 ಕ್ಕೆ ಇಳಿಕೆಯಾಗಿದೆ.